ಸಾಲಗಾರರ ಮಾಹಿತಿಗಾಗಿ

ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆಯ ಅನುಸಾರ ಬ್ಯಾಂಕಿನಿಂದ ಸಾಲ ಪಡೆದ ಪ್ರತಿಯೊಬ್ಬ ಸಾಲಗಾರರು ಸಾಲ ಮರುಪಾವತಿಗೆ ಬ್ಯಾಂಕು ನಿಗಧಿ ಪಡಿಸಿದ ಅವಧಿಗೆ ಸರಿಯಾಗಿ ಅಂದರೆ ಅವಧಿಗೆ ಅಸಲು ಹಾಗೂ ಬಡ್ಡಿಯನ್ನು ಮರುಪಾವತಿಸುವುದು. ಒಂದು ವೇಳೆ ಸಾಲ ಪಡೆದು ಬ್ಯಾಂಕು ನಿಗಧಿ ಪಡಿಸಿದ ದಿನಾಂಕಗಳಲ್ಲಿ ಅಸಲು ಹಾಗೂ ಬಡ್ಡಿಯನ್ನು ಪಾವತಿಸದೆ ಇದ್ದಲ್ಲಿ ಅಂತಹ ಸಾಲದ ಖಾತೆಗಳನ್ನು ಈ ಕೆಳಕಂಡ ವಿಧಾನದಲ್ಲಿ ವರ್ಗೀಕರಿಸಲಾಗುವುದು.

0 ರಿಂದ 30 ದಿನಗಳವರೆಗೆ ಕಂತು (ಅಸಲು / ಬಡ್ಡಿ ಅಥವಾ ಅಸಲು ಹಾಗೂ ಬಡ್ಡಿ) ಸುಸ್ತಿಯಾದಲ್ಲಿ
SMA 0 ಎಂದು ವರ್ಗೀಕರಿಸಲಾಗುವುದು.

31 ರಿಂದ 60 ದಿನಗಳವರೆಗೆ ಕಂತು (ಅಸಲು / ಬಡ್ಡಿ ಅಥವಾ ಅಸಲು ಹಾಗೂ ಬಡ್ಡಿ) ಸುಸ್ತಿಯಾದಲ್ಲಿ
SMA 1 ಎಂದು ವರ್ಗೀಕರಿಸಲಾಗುವುದು.

61 ರಿಂದ 90 ದಿನಗಳವರೆಗೆ ಕಂತು (ಅಸಲು / ಬಡ್ಡಿ ಅಥವಾ ಅಸಲು ಹಾಗೂ ಬಡ್ಡಿ) ಸುಸ್ತಿಯಾದಲ್ಲಿ
SMA 2 ಎಂದು ವರ್ಗೀಕರಿಸಲಾಗುವುದು.

90 ದಿನಗಳಿಗೆ ಮೀರಿ ಅಸಲು ಅಥವಾ ಬಡ್ಡಿ ಅಥವಾ ಅಸಲು ಹಾಗೂ ಬಡ್ಡಿ ಪಾವತಿಸದೆ ಸುಸ್ತಿಯಾದಲ್ಲಿ ಅಂತಹ ಖಾತೆಗಳನ್ನು
ಅನುತ್ಪಾದಕ ಸಾಲಗಳೆಂದು ಗುರುತಿಸಲಾಗುವುದು.

ಉದಾ : ಒಬ್ಬ ಗ್ರಾಹಕ ದಿನಾಂಕ : 15.01.2022ರಲ್ಲಿ ರೂ.1,00,000/- ಗಳ ಅವಧಿ ಸಾಲವನ್ನು 5 ವರ್ಷಗಳ ಅವಧಿಗೆ ಪಡೆದಿದ್ದಲ್ಲಿ, ಅಂತಹ ಗ್ರಾಹಕ ಪ್ರತಿಮಾಹೆ 15ನೇ ತಾರೀಖಿನಂದು ಸಾಲದ ಕಂತನ್ನು ಬಡ್ಡಿ ಸಮೇತ ಪಾವತಿಸಬೇಕಾಗಿರುತ್ತದೆ.

ಅಂದರೆ ದಿನಾಂಕ : 15.02.2022ರಲ್ಲಿ ಸಾಲದ ಕಂತು ಮರುಪಾವತಿಸದೆ ಸಂಪೂರ್ಣ ಸುಸ್ತಿಯಾದಲ್ಲಿ 30 ದಿನಗಳವರೆಗೆಅಂದರೆ 16.03.2022ರ ವರೆಗೆ ಅಂತಹ ಖಾತೆಯನ್ನು SMA 0 ಎಂದು ಪರಿಗಣಿಸಲಾಗುವುದು. ದಿನಾಂಕ : 16.03.2022ರ ನಂತರವು ಸಾಲದ ಕಂತು ಮರುಪಾವತಿಸದಿದ್ದಲ್ಲಿ ದಿನಾಂಕ : 14.04.2022ರ ನಂತರ SMA 1 ಎಂದು ಪರಿಗಣಿಸಲಾಗುವುದು.

ದಿನಾಂಕ : 14.04.2022ರ ನಂತರ ಸಾಲ ಮರುಪಾವತಿಸಲು ತಪ್ಪಿದಲ್ಲಿ ಅಂತಹ ಖಾತೆಯನ್ನು ದಿನಾಂಕ : 13.05.2022ರ ನಂತರ SMA 2 ಎಂದು ಪರಿಗಣಿಸಲಾಗುವುದು ಹಾಗೂ ಆ ದಿನಾಂಕದ ನಂತರವು ಸಾಲ ಮರುಪಾವತಿಸದಿದ್ದಲ್ಲಿ ಅಂತಹ ಸಂದರ್ಭದಲ್ಲಿ ಸದರಿ ಸಾಲದ ಖಾತೆಯನ್ನು ಎನ್.ಪಿ.ಎ. (ಅನುತ್ಪಾದಕ ಸಾಲದ ಖಾತೆ) ಎಂದು ವರ್ಗೀಕರಿಸಲಾಗುವುದು. ಈ ಒಂದು ಪ್ರಕ್ರಿಯೆಯು ಬ್ಯಾಂಕಿನ ದೈನಂದಿನ ಕೆಲಸ ಕಾರ್ಯ ಸಂಪೂರ್ಣಗೊಂಡ ಕೂಡಲೇ ಸಾಲದ ಖಾತೆಗೆ ಅನ್ವಯವಾಗುವುದು.

ಆದುದರಿಂದ ಬ್ಯಾಂಕಿನಿಂದ ಸಾಲ ಪಡೆಯುವ ಪ್ರತಿಯೊಬ್ಬ ಸಾಲಗಾರರು ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಸಾಲದ ಕಂತುಗಳ ಮರುಪಾವತಿಯನ್ನು ಬ್ಯಾಂಕು ಸಾಲ ಮರುಪಾವತಿಗೆ ನಿಗಧಿಪಡಿಸಿದ ದಿನಾಂಕಗಳಲ್ಲಿ ತಪ್ಪದೇ ಕಡ್ಡಾಯವಾಗಿ ಮರುಪಾವತಿಸುವುದು.

ಹೆಚ್ಚಿನ ಮಾಹಿತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಸುತ್ತೋಲೆಯನ್ನು ಪರಿಶೀಲಿಸಬಹುದಾಗಿರುತ್ತದೆ.